ಒಂಟಿ ಮನೆಯಲ್ಲಿ ಪ್ರೇಮದ ಪಾಠ - ರೇಟಿಂಗ್ : 3.5/5 ****
Posted date: 18 Sat, Nov 2023 10:24:40 AM
ಜೀವನದಲ್ಲಿ ನಡೆಯುವ ಬಹುತೇಕ ಘಟನೆಗಳು ನಮ್ಮ ಹತೋಟಿಯಲ್ಲಿರುವುದಿಲ್ಲ, ಅವುಗಳಿಗೆ ನಾವು ಹೊಂದಿಕೊಂಡು ಹೋಗಬೇಕಷ್ಟೇ. ಒಂಟಿ ಜೀವನದ ನೋವು  ವೇದನೆ  ಅದರಿಂದಾಗುವ ಪರಿಣಾಮಗಳು ಇದನ್ನೆಲ್ಲ ಎಳೆ ಎಳೆಯಾಗಿ ಬಿಚ್ಚಿಡುವುದೇ ದಿ ವೆಕೆಂಟ್ ಹೌಸ್ ಚಿತ್ರದ ಕಥಾಹಂದರ.

ಪ್ರೀತಿಸುವ ವ್ಯಕ್ತಿ ನಮ್ಮ ಕಣ್ಣೆದುರು ಇಲ್ಲದಿದ್ದಾಗ  ನಮ್ಮ ಮನಸ್ಸು  ಯಾವ ರೀತಿ ಪರಿತಪಿಸುತ್ತದೆ. ಅನಿರೀಕ್ಷಿತವಾಗಿ ಸಿಗೋ ಸ್ನೇಹ, ಪ್ರೀತಿ ನಮ್ಮ ಬದುಕನ್ನು  ಯಾವ ಹಂತಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು  ಎರಡು ಪಾತ್ರಗಳೊಂದಿಗೆ ನಿರ್ದೇಶಕಿ ಎಸ್ತರ್ ನರೋನಾ ಹೇಳಹೊರಟಿದ್ದಾರೆ. ಬದುಕಿದ್ದಾಗ ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರು, ದೇಹ ತೊರೆದಮೇಲೆ ಯಾಕೆ ಮರೆತುಬಿಡುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.  ಒಂಟಿ ಮನೆಯಲ್ಲಿ ವಾಸಿಸುವ ಶಿಕ್ಷಕ ಮಾನವ್ (ಶ್ರೇಯಸ್ ಚಿಂಗಾ) ಶಾಲೆಯೊಂದರಲ್ಲಿ ಮಕ್ಕಳಿಗೆ ಪಾಠ ಹೇಳಿಕೊಂಡಿರುತ್ತಾನೆ, ಒಂಟಿಯಾಗಿದ್ದ ಮಾನವ್‌ಗೆ ಎದುರಿದ್ದ ಖಾಲಿಮನೆಗೆ ವಯಸ್ಸಾದ ಮಹೇಶ್(ಸಂದೀಪ್ ಮಲಾನಿ) ಹಾಗೂ ಮೋಹಾ(ಎಸ್ತರ್ ನರೋನ್ಹಾ) ಬಂದಿಳಿಯುತ್ತಾರೆ. ಚೆಲುವಿನ ಚಿಲುಮೆಯಂತಿದ್ದ ಮೋಹಾಳ ಸೌಂದರ್ಯಕ್ಕೆ ಮೊದಲ ನೋಟದಲ್ಲೇ ಮಾರುಹೋದ ಮಾನವ್, ಆಕೆಯನ್ನು ಭೇಟಿ ಮಾಡಲು ಹಲವು ಬಾರಿ ಪ್ರಯತ್ನಿಸುತ್ತಾನೆ.
ನಂತರ  ಗೆಳತಿಯ ಮೂಲಕ  ಮೋಹಾಳ ಸ್ನೇಹ, ವಿಶ್ವಾಸ  ಗಳಿಸುತ್ತಾನೆ. ಅವರಿಬ್ಬರೂ ದಂಪತಿಯೆಂಬುದು ನಂತರ ಗೊತ್ತಾಗಿ ಮಾನವ್ ಹಿಂದೆ ಸರಿದರೂ ಮೋಹಾ ಈತನನ್ನು ಬಿಡುವುದಿಲ್ಲ. ಕಾರ್ಯಕ್ರಮವೊಂದಕ್ಕೆ ಊರಿಗೆ ಹೋಗಿದ್ದ ಆ ದಂಪತಿಯ ಕಾರು ಆಕ್ಸಿಡೆಂಟ್ ಆಗಿ ಮಹೇಶ್ ಸ್ಥಳದಲ್ಲೇ ಅಸುನೀಗುತ್ತಾನೆ. ಮೋಹ ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂಬ ವಿಚಾರ ಮಾನವ್‌ಗೆ ನಂತರ ತಿಳಿಯುತ್ತದೆ. ಇಲ್ಲಿಂದ ಮಾನವ್ ಬದುಕಿನ ಹಾದಿಯಲ್ಲಿ  ರೋಚಕ ಘಟನೆಗಳು, ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ. ಮೋಹ ಮತ್ತೆ ತನ್ನ ಮನೆಗೆ ಬಂದಿರುತ್ತಾಳೆ, ಮಾನವ್ ಆಕೆಯನ್ನು ಕಂಡು ಖುಷಿಯಾಗುತ್ತಾನೆ, ಒಂಟಿಯಾಗಿದ್ದ ಆಕೆಯ ಮನೆಯಲ್ಲೇ  ಮಾನವ್ ಉಳಿಯುತ್ತಾನೆ. ಆದರೆ ಮಾನವ್‌ಗೆ ಆ ಮನೆಯಲ್ಲಿ ಚಿತ್ರವಿಚಿತ್ರ ಅನು`Àವಗಳಆಗುತ್ತದೆ, ಆದರೆ ಮೋಹ ಇದಾವುದರ ಪರಿವೆಯೇ ಇಲ್ಲದಂತಿರುತ್ತಾಳೆ,  ಮೋಹ ನಿಜವಾಗಿಯೂ ಬದುಕಿ ಬಂದಿದ್ದಳಾ,  ಮನೆಯಲ್ಲಿ ಮಾನವ್‌ಗೆ ಯಾಕೆ ವಿಚಿತ್ರ ಅನುಭವಗಳಾದವು ಇದಕ್ಕೆಲ್ಲ ಉತ್ತರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿದೆ.

ಮಹಿಳಾ ನಿರ್ದೇಶಕಿಯಾಗಿ ಎಸ್ತರ್ ನರೋನ್ಹಾ ಅವರ ಈ ವಿಭಿನ್ನ ಪ್ರಯತ್ನವನ್ನು ನಿಜವಾಗಿಯೂ ಮೆಚ್ಚಲೇಬೇಕು. ಮೊದಲ ಹಂತದಲ್ಲೇ ಕ್ಲಿಷ್ಟಕರ  ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭವಲ್ಲ,  ಕಥೆ, ಚಿತ್ರಕಥೆ, ಸಂಗೀತ, ನಿರ್ಮಾಣದ ಜೊತೆ ನಿರ್ದೇಶನವನ್ನೂ  ನಿಭಾಯಿಸಿದ್ದಾರೆ. ನಾಯಕಿಯಾಗಿಯೂ ಕೂಡ ಎಸ್ತರ್ ನರೋನ್ಹಾ  ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅದೇರೀತಿ ನಾಯಕನಾಗಿ ಶ್ರೇಯಸ್ ಚಿಂಗಾ ತಮ್ಮ  ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಉಳಿದಂತೆ ಸಂದೀಪ್ ಮಲಾನಿ, ನಾಯಕನ ಸ್ನೇಹಿತೆ ಸೀಮಾ ಗಮನ ಸೆಳೆಯುತ್ತಾರೆ. ಕೇವಲ ೫ ಪಾತ್ರಗಳನ್ನಿಟ್ಟುಕೊಂಡು  ಇಡೀ  ಚಿತ್ರವನ್ನು ನಿರೂಪಿಸಲಾಗಿದೆ. ಛಾಯಾಗ್ರಹಕ ನರೇಂದ್ರಗೌಡ ಅವರ  ಶ್ರಮ ಚಿತ್ರದಲ್ಲಿ  ಕಾಣುತ್ತದೆ. ಅದಕ್ಕೆ ತಕ್ಕಂತೆ  ಹಿನ್ನೆಲೆ ಸಂಗೀತವೂ ಮೂಡಿಬಂದಿದೆ.  ಚಿತ್ರದ ದ್ವಿತೀಯ ಭಾಗದಲ್ಲಿ  ಹಾರರ್ ಎದ್ದು ಕಾಣುತ್ತದೆ. ಸಸ್ಪೆನ್ಸ್, ಥ್ರಿಲ್ಲರ್ ದೆವ್ವದ  ಚಿತ್ರಗಳನ್ನು ಇಷ್ಟಪಡುವವರಗೆ ಈ ಚಿತ್ರ ಬಹುಬೇಗ ಆಪ್ತವಾಗುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed